ವರದಿ ರಾಯಿ ರಾಜಕುಮಾರ

ಮೂಡುಬಿಗೆರೆ:  ಕೋ ಆಪರೇಟಿವ್ ಸರ್ವಿಸ್ ಸೊಸೈಟಿ ಅವರು ಪ್ರತಿ ವರ್ಷವೂ ಆಚರಿಸುತ್ತಿರುವ ಸಹಕಾರ ಸಪ್ತಾಹ ಸಂಭ್ರಮ 2025 ನವೆಂಬರ್ 14 ರಿಂದ 22 ತನಕ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ ನಡೆಯಲಿದೆ. ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವದ ಹೆಸರಲ್ಲಿ  ಈ ಕಾರ್ಯಕ್ರಮ ನಡೆಯುತ್ತಿದೆ. 

ನವೆಂಬರ್ 14 ರಂದು ಸಹಕಾರಿ ಸಪ್ತಾಹದ ಉದ್ಘಾಟನೆಯೊಂದಿಗೆ ಕಲ್ಪವೃಕ್ಷ ಪ್ರಶಸ್ತಿಯನ್ನು ಅತ್ಯುತ್ತಮ ಸಹಕಾರಿ ಮತ್ತು ಸಮಾಜ ಸೇವಕ ಎಂ ಜಾರ್ಜ್ ಮೋನೀಸ್ ಅವರಿಗೆ ನೀಡಿ ಸನ್ಮಾನಿಸಲಾಗುವುದು. ನವೆಂಬರ್ 15 ರಂದು ಸಹಕಾರ -ಪರಿಸರ ಸಂರಕ್ಷಣೆ-ಕೃಷಿ, ಪಶು ಸಂಗೋಪನೆ-ಗ್ರಾಮೀಣ ಅಭಿವೃದ್ಧಿ ದಿನಾಚರಣೆ ನಡೆಯಲಿದೆ. 

ನವೆಂಬರ್ 16 ರಂದು ಸಮಗ್ರ ಸಾಧಕ ಪ್ರಶಸ್ತಿಯನ್ನು 200ಕ್ಕೂ ಹೆಚ್ಚು ಕುಟುಂಬಗಳಿಗೆ ಆಶ್ರಯದಾತರಾದ ಯುವ ಉದ್ಯಮಿ ಎಂ ಅಭಿಜಿತ್ ಅವರಿಗೆ ನೀಡಿ ಸನ್ಮಾನಿಸಲಾಗುವುದು. ನವೆಂಬರ್ 17 ರಂದು ಸಹಕಾರ ಮತ್ತು ಮಾನವೀಯ ಮೌಲ್ಯಗಳು ವಿಷಯವಾಗಿ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 18 ರಂದು ಸಹಕಾರ-ಉಚಿತ ಕಾನೂನು ಸೇವೆಗಳ ವಿಚಾರವಾಗಿ ಮಾಹಿತಿ ದೊರಕಲಿದೆ. ನವೆಂಬರ್ 19 ರಂದು ರಾಷ್ಟ್ರೀಯ ಚಿಂತನೆ ಜರುಗಿ 20ರಂದು ಯುವಜನ ಸೇವೆಗಳ ಬಗ್ಗೆ ಮಾಹಿತಿ ವಿನಿಮಯವಾಗಲಿದೆ. 

ಈ ರೀತಿ ಪ್ರತಿದಿನ ಸಂಜೆ ಗಂಟೆ 6:00 ರಿಂದ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 7:30 ರಿಂದ ಕಾರ್ಯಕ್ರಮಗಳು ವಿವಿಧ ತಂಡಗಳಿಂದ ಎಂದು ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಬಾಹುಬಲಿ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. 

ಇದೇ ಸಂದರ್ಭದಲ್ಲಿ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಅವರು ಮಾಹಿತಿ ನೀಡಿ 12 ಜನ ರ್‍ಯಾಂಕ್ ವಿಜೇತರನ್ನು, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಗಣ್ಯರನ್ನು, ವಿವಿಧ 30 ಶಾಲೆ ಕಾಲೇಜುಗಳಿಗೆ ಆರ್ಥಿಕ ನೆರವನ್ನು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು, ಕಲಾ ಪೋಷಕ 10 ಸಂಸ್ಥೆಗಳಿಗೆ ಪುರಸ್ಕಾರವನ್ನು ನೀಡಲಾಗುವುದು. ಅದರೊಂದಿಗೆ ಪ್ರಸ್ತುತ ವರ್ಷ ನಿವೃತ್ತ ರಾಗಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ್ ಕಾಮತ್ ಹಾಗೂ ಜವಾನ ಶೇಖರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ ಗಣೇಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ್ ಕಾಮತ್, ನಿರ್ದೇಶಕರುಗಳಾದ ಅಭಯ ಚಂದ್ರ ಜೈನ್, ಜಾರ್ಜ್ ಮೋನಿಸ್, ಮನೋಜ್ ಕುಮಾರ್ ಶೆಟ್ಟಿ, ಎನ್ ಪದ್ಮನಾಭ, ಪಿ ಎಚ್ ಅಬ್ದುಲ್ ಗಫೂರ್, ಜಯರಾಮ ಕೋಟ್ಯಾನ್, ಎಂಪಿ ಅಶೋಕ್ ಕಾಮತ್, ಪ್ರೇಮ ಎಸ್ ಸಾಲಿಯಾನ್, ಅನಿತಾ ಶೆಟ್ಟಿ, ದಯಾನಂದ ನಾಯ್ಕ್, ಹಾಜರಿದ್ದರು.