ಮಂಗಳೂರು : ಯಕ್ಷಗಾನ ತುಳುನಾಡಿನ ಗಂಡುಕಲೆ ಈ ರಂಗಕಲೆಯನ್ನು ಮಕ್ಕಳಿಗೆ ಬೋಧಿಸುವುದರಿಂದ ದೈಹಿಕ ಆರೋಗ್ಯ ನೈತಿಕ ಮೌಲ್ಯದೊಂದಿಗೆ ಮಕ್ಕಳು ಆರೋಗ್ಯಕರ ಬದುಕನ್ನು, ಸ್ವಾಸ್ಥ್ಯ ಸಮಾಜದ ನಿರ್ಮಾಣವನ್ನು ಮಾಡಲು ಸಾಧ್ಯ ಎಂದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ನಾಗಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಹಕಾರದೊಂದಿಗೆ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಯುವ ತುಳು ಯಕ್ಷ ಜಾತ್ರೆಯ ಆರನೆಯ ದಿನದ ಯಕ್ಷಗಾನವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ದಯಾನಂದ ಜಿ ಕತ್ತಲ್ ಸಾರ್ ಇವರು ಮಕ್ಕಳಿಗೆ ತುಳು ಸಾಹಿತ್ಯದ ಪರಿಚಯವಾಗಬೇಕು ಅದರೊಂದಿಗೆ ಪರಿಶುದ್ಧವಾದ ಭಾಷೆ ಮತ್ತು ಪುರಾಣ ಜ್ಞಾನ ಮಕ್ಕಳಿಗೆ ಪ್ರಾಪ್ತಿಯಾಗಬೇಕು ಅದಕ್ಕೆ ಯಕ್ಷಗಾನವೂ ಒಂದು ಮಾಧ್ಯಮ, ಬಣ್ಣ ಹಚ್ಚಿ ಕುಣಿಯುವ ಸಂತಸದೊಂದಿಗೆ ತುಳು ಭಾಷಾ ಪಾಠ ಸಕ್ಕರೆ ಪಾಯಸದಂತೆ ಸ್ವೀಕರಿಸಲ್ಪಡುತ್ತದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕುಮಾರ್ ಕಟೀಲ್ ಇವರು ಅಕಾಡೆಮಿ ಯಕ್ಷಗಾನಕ್ಕೆ ಕೊಡುವ ಅವಕಾಶ ಮತ್ತು ತೆರೆಮರೆಯ ಕಲಾವಿದರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ ಕಾರ್ಯ ಎಂದು ತಮ್ಮ ಅತಿಥೇಯ ನುಡಿಯಲ್ಲಿ ನುಡಿದರು. ಲಯನ್ ಪ್ರಸಾದ್ ರೈ ಕಲ್ಲಿಮಾರು, ಸೋಮಶೇಖರ ಚೌಟ ಹರೇಕಳ, ಅಭಿಲಾಶ್ ಕಂಬ್ಳಪದವು ಕೊಣಾಜೆ, ಚಂದ್ರಶೇಖರ ಗಟ್ಟಿ ಹಂದಾಡಿ, ಬಿ. ಹರಿಪ್ರಸಾದ್ ಅಶೋಕ್ ನಗರ,  ಭಾಗವತ ಧೀರಜ್ ರೈ ಸಂಪಾಜೆ ಉಪಸ್ಥಿತರಿದ್ದರು. ಸಾಧಕರಾದ ಸತೀಶ್ ನೀರ್ಚಾಲ್ ಮತ್ತು ಪಡ್ರೆ ಆನಂದ್ ಇವರನ್ನು ಸಂಪಾಜೆ ಶೀನಪ್ಪ ರೈ ವೇದಿಕೆಯಲ್ಲಿ  ಗೌರವಿಸಲಾಯಿತು. ಸದಸ್ಯ ಸಂಚಾಲಕರು ಅಕಾಡೆಮಿ ಸದಸ್ಯ ಕಡಬ ದಿನೇಶ್ ರೈ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ನಂತರ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಶಾರದಾ ನಗರ ಇವರಿಂದ ಮೈಮೆದ ಬಾಲೆ ಸಿರಿ ಕೃಷ್ಣ ಗಾನ ಬಯಲಾಟ ನಡೆಯಿತು.