ಬೆಳ್ಮಣ್ಣು: ಜೇಸಿಐ ನ 44ನೇ ವರ್ಷಾಚರಣೆ ಅಂಗವಾಗಿ ಘಟಕಾಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಾಧ್ಯಕ್ಷರುಗಳ ಸಮ್ಮಿಲನ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಜೇಸಿಐ ವಲಯ ಉಪಾಧ್ಯಕ್ಷರಾದ ರಾಕೇಶ್ ಹೊಸಬೆಟ್ಟು, ಬೆಳ್ಮಣ್ಣು ಜೇಸಿಐ ಪೂರ್ವಾಧ್ಯಕ್ಷರಾದ ಶರತ್ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ ಅಬ್ಬನಡ್ಕ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಯುವ ಜೇಸಿ ಅಧ್ಯಕ್ಷೆ ಪೂರ್ವಿ ರಾವ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ ಮೊದಲಾದವರಿದ್ದರು.











ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರುಗಳಾದ ಪ್ರಕಾಶತ್ಮ, ತುಕಾರಾಮ ಶೆಟ್ಟಿ, ಜಯಂತ್ ರಾವ್, ಸತೀಶ್ ಕುಮಾರ್, ಸುರೇಶ್ ರಾವ್, ವಾಲ್ಟರ್ ಮೊಂತೆರೋ, ರಾಜೇಂದ್ರ ಭಟ್, ಅನಿಲ್ ಕುಮಾರ್, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಸುಧಾಕರ್ ರಾವ್, ಮುರಳೀಧರ ಜೋಗಿ, ಶರತ್ ರಾವ್, ದೀಪಕ್ ಕಾಮತ್, ರಘುರಾಮ ರಾವ್, ಸತೀಶ್ ಕೋಟ್ಯಾನ್, ದಿನೇಶ್ ಸುವರ್ಣ, ರಘುನಾಥ ನಾಯಕ್, ಸುಭಾಸ್ ಕುಮಾರ್, ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ರವಿರಾಜ್ ಶೆಟ್ಟಿ, ಪ್ರದೀಪ್ ಆಚಾರ್ಯ, ಸತ್ಯನಾರಾಯಣ ಭಟ್, ವೀನೇಶ್ ಅಮೀನ್, ಸತೀಶ್ ಪೂಜಾರಿ ಅಬ್ಬನಡ್ಕ ಅವರನ್ನು ಸನ್ಮಾನಿಸಿದರು.