ಮಂಗಳೂರು :  ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ವತಿಯಿಂದ "ಸ್ಟ್ರೆಸ್ ಮ್ಯಾನೇಜ್ಮೆಂಟ್ ಅಂಡ್ ವರ್ಕ್ ಬ್ಯಾಲೆನ್ಸ್" ಈ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ಆಗಸ್ಟ್ 7 ರಂದು ನಡೆಸಲಾಯಿತು. ಇದನ್ನು ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ ಡಾ . ಪದ್ಮರಾಜ್ ಹೆಗ್ಡೆ ಯವರು ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಸುಭಾಷ್ ಹೆಗ್ಡೆ, ಎಂ ಬಿ ಏ , ಸರ್ಟಿಫೈಡ್ ಬಿಹೆವಿಯರಲ್ ಎನಾಲಿಸ್ಟ್ ಅಂಡ್ ವೆಲ್ನೆಸ್ ಕೋಚ್ ,ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇಂದಿನ ಆದುನಿಕ ದಿನಗಳಲ್ಲಿ ದಂತ ವೈದ್ಯಕೀಯದಲ್ಲಿ ವೈದ್ಯರುಗಳು ಅನುಭವಿಸುವ ಮಾನಸಿಕ ಒತಡಗಳು ಹಾಗು ಅದನ್ನು ವೈದ್ಯರುಗಳು  ಯಾವ ರೀತಿಯಲ್ಲಿ ಸರಿಯಾಗಿ ನಿಭಾಯಿಸಬಹುದು ಎಂಬ ಬಗ್ಗೆ ಅವರು ಈ ಸಂದರ್ಭದಲ್ಲಿ ವಿವರಿಸಿದರು.  ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಡಾ. ಭರತ್ ಪ್ರಭು ಹಾಗು ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ರವರು ಉಪಸ್ಥಿತರಿದ್ದರು. ಡಾ. ರಚನಾ ಶೆನೊಯ್ ಅವರು ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.