ಮಂಗಳೂರು : ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ ನಡಿಯಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇದಸನದಲ್ಲಿ ತಯಾರಾದ  ಬಹು ನಿರೀಕ್ಷೆಯ ತುಳು ಸಿನಿಮಾ "ಅಬತರ"  ಅಗೋಸ್ಟ್ ೧೮ ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಈ ಸಿನಿಮಾವನ್ನು  ನಿಖಿಲ್ ಕೀರ್ತಿ ಸಾಲ್ಯಾನ್ ನಿರ್ಮಿಸಿದ್ದಾರೆ. ಈ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕೋವಿಡ್ ನಿಂದಾಗಿ ಚಿತ್ರ ತೆರೆಗೆ ಬರುವುದು ಸ್ವಲ್ಪ ವಿಳಂಬವಾಗಿದೆ. ಸಮಯ ಸಂದರ್ಭ ನೋಡಿ ಈಗ ಸಿನಿಮಾವನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ನಿರ್ದೇಶಕ, ನಟ ಅರ್ಜುನ್ ಕಾಪಿಕಾಡ್ ತಿಳಿಸಿದ್ದಾರೆ.

ಪ್ರೇಕ್ಷಕರು ಇಷ್ಟ ಪಡುವಂತೆ ಇದು ಸಂರ್ಪೂ ಹಾಸ್ಯ ಚಿತ್ರದ ಪ್ಯಾಕೇಜ್. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ. ಅಬತರ ಹಾಸ್ಯ ಸಿನಿಮಾದ ಕತೆಯನ್ನು ಡಾ| ದೇವದಾಸ್ ಕಾಪಿಕಾಡ್ ರಚಿಸಿ, ಅಭಿನಯಿಸಿ ತುಳುನಾಡ ಆಕ್ಷನ್ ಕಿಂಗ್ "ಅರ್ಜುನ್ ಕಾಪಿಕಾಡ್" ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ  ನವೀನ್ ಡಿ ಪಡಿಲ್,  ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ,  ಶನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ಮತ್ತು ನಾಯಕನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ  ವಿಷ್ಣು ಪ್ರಸಾದ್, ಜೇಕೋಬ್,  ಕಾರ್ಯಕಾರಿ ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ ಕೆಲಸ ಮಾಡಿದ್ದಾರೆ.ಬಿನ್ನೆರ್ ಹಾಡು ಜನಪ್ರಿಯತೆ ಅಬತರ ಸಿನಿಮಾದಲ್ಲಿರುವ  ಬಿನ್ನೆರ್ ಬೈದಿನ ಹಾಡು ಚಿತ್ರ ಬಿಡುಗಡೆಗೂ ಮುನ್ನವೇ ಯೂಟ್ಯೂಬ್ ನಲ್ಲಿ ೫ ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯಾಗಿ, ಜನಪ್ರಿಯವಾಗಿದೆ.

ಬೊಳ್ಳಿ ಮೂವೀಸ್ ನಲ್ಲಿ ತಯಾರಾಗುವ ಸಿನಿಮಾಗಳೆಂದರೆ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಆಸಕ್ತಿ ಇದೆ. ಬೊಳ್ಳಿ ಮೂವೀಸ್ ನಡಿಯಲ್ಲಿ ತಯಾರಾದ ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ನೋಡಿ ಇಷ್ಟಪಟ್ಟಿದ್ದಾರೆ, ಮೆಚ್ಚಿದ್ದಾರೆ. ಹೀಗಾಗಿ ಕುತೂಹಲ ಸಹಜ. ಅದರಲ್ಲೂ ಅರ್ಜುನ್ ಕಾಪಿಕಾಡ್ ಈ ಹಿಂದೆ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಸಹ ನಿರ್ದೇಶಕರಾಗಿ ಪಳಗಿ ಕೆಲಸ ಮಾಡಿದವರು. ಸಿನಿಮಾದ ಆಗು ಹೋಗುಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ಜೊತೆಗೆ ತಂದೆ ದೇವದಾಸ್ ಕಾಪಿಕಾಡ್ ಅವರ ಶ್ರೀರಕ್ಷೆ, ಮಾರ್ಗದರ್ಶನದಲ್ಲಿ ಅವರ ಚೊಚ್ಚಲ ನಿರ್ದೇಶನದ ಅಬತರ ಸಿನಿಮಾ ಆಗೋಸ್ಟ್ ೧೮ ರಂದು ತೆರೆಕಾಣಲಿದೆ. ದೇಶ, ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ ಚಿತ್ರತಂಡ. ಹಿರಿಯ ಕಲಾವಿದರ ಸಹಕಾರ

ಚಿತ್ರ ತಂಡದಲ್ಲಿರುವ ಹಿರಿಯ ಕಲಾವಿದರಾದ ನವೀನ್ ಡಿ ಪಡೀಲ್ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಮೊದಲಾದವರು ಅರ್ಜುನ್ ರನ್ನು ಎಳೆಯದರಲ್ಲೇ ನೋಡಿದವರು. ಅರ್ಜುನ್ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆಂದಾಗ ಹಿರಿಯ ಕಲಾವಿದರೆಲ್ಲರೂ ಅವರಿಗೆ ಜೊತೆಯಾಗಿ ಉತ್ತಮ ಸಾಥ್ ನೀಡಿದ್ದಾರೆ. ಅನೇಕ ಮಂದಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.