ಅಬಕಾರಿ ನೀತಿ ಸಂಬಂಧದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆಪಾದಿಸಿ ಜಾರಿ ನಿರ್ದೇಶನಾಲಯದವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಬಂಧಿಸಿದ್ದಾರೆ.
ದಿಲ್ಲಿ ಹೈಕೋರ್ಟ್ ಕೇಜ್ರೀವಾಲ್ ಅವರಿಗೆ ಮಧ್ಯಂತರ ವಿನಾಯಿತಿ ನೀಡಲು ನಿರಾಕರಿಸಿದೆ. ಅದಾದ ಮೇಲೆ ಗುರುವಾರ ರಾತ್ರಿಯೇ ಕೇಜ್ರೀವಾಲ್ ಅವರ ಮನೆಗೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯದವರು ಅವರನ್ನು ಬಂಧಿಸಿದ್ದಾರೆ.
ಚುನಾವಣಾ ಕಾಲದಲ್ಲಿ ಮೋದಿಯವರ ಸರಕಾರ ನಡೆಸಿರುವ ಕುತಂತ್ರ ಇದು ಎಂದು ಆಮ್ ಆದ್ಮಿ ಪಕ್ಷ ಬಿಜೆಪಿಯನ್ನು ಟೀಕಿಸಿದೆ ಮತ್ತು ಪ್ರತಿಭಟನೆ ನಡೆಸಿದೆ.