ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯೊಳಗಡೆ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ನಗರದ ವ್ಯಾಪ್ತಿಯೊಳಗಡೆ ಕನಿಷ್ಠ 5 ವರ್ಷ ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದು, ಈಗಾಗಲೇ ನಗರದಲ್ಲಿ ಕಾರ್ಯಚರಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರ ಸಂಘ ಅಥವಾ ಒಕ್ಕೂಟದ ಸದಸ್ಯರುಗಳಿಂದ ಮೀಸಲಾತಿ ಪ್ರಕಾರ ಸಾಮಾನ್ಯ-1 ಹಿಂದುಳಿದ ವರ್ಗ-1, ಪರಿಶಿಷ್ಠ ಜಾತಿ-1, ಪರಿಶಿಷ್ಟ ಪಂಗಡ-1, ಅಲ್ಪಸಂಖ್ಯಾತರು-2, ಮಹಿಳೆ-3 ಮತ್ತು ಅಂಗವಿಕಲರು-1, ಕೇಂದ್ರ ಸರಕಾರ ಪುರಸ್ಕøತ DAY NULM/ DJAY S ಯೋಜನೆಯ ಅಡಿಯಲ್ಲಿ ಸ್ಥಾಪಿತಗೊಂಡಿರುವ ಮಹಿಳಾ ALF/SHG ಸದಸ್ಯರು, ಕನಿಷ್ಠ 5 ವರ್ಷಗಳಿಂದ ಸಮಾಜಸೇವೆಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರೇತರ ಸ್ವಯಂ ಸೇವಾಸಂಸ್ಥೆಯ ಪ್ರತಿನಿಧಿ - ಬೀದಿಬದಿ ವ್ಯಾಪಾರಿಗಳೊಂದಿಗೆ ಕಾರ್ಯನಿರ್ವಹಿಸುವ ಸಂಸ್ಥೆಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ 5 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಂಗಳೂರು ಮಹಾನಗರ ವ್ಯಾಪ್ತಿಯೊಳಗಡೆಯ ಸಮಾಜ ಕಾರ್ಯಕರ್ತರು/ಸೇವಕರು, ಟ್ರೇಡ್ ಯೂನಿಯನ್ ಪ್ರತಿನಿಧಿ, ಹೋಟೆಲ್ ಮಾಲಕರ ಸಂಘದ ಪ್ರತಿನಿಧಿ, ಮಾರುಕಟ್ಟೆ ಅಥವಾ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿ ಅರ್ಜಿ ಸಲ್ಲಿಸಬಹುದು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಡೆಯ ಆಸಕ್ತರು ಜುಲೈ 25 ರೊಳಗಡೆ ಸ್ವಯಂ ಲಿಖಿತ ಅರ್ಜಿಯನ್ನು ಮಂಗಳೂರು ಮಹಾನಗರಪಾಲಿಕೆ ಕಾರ್ಯಾಲಯದ ಡೇ-ನಲ್ಮ್ ಯೋಜನೆ ಸಮುದಾಯ ವ್ಯವಹಾರಗಳ ಅಧಿಕಾರಿ ಕಛೇರಿಗೆ ಭೇಟಿ ನೀಡಿ ಅರ್ಜಿ ಅಥವಾ ಇ-ಮೇಲ್ commissioner mec@gmail.com ಮುಖಾಂತರ ಸಲ್ಲಿಸಬಹುದುಎಂದು ಮಂಗಳೂರು ಮಹಾನಗರಪಾಲಿಕೆಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.