ನೈರೋಬಿಯಲ್ಲಿ ಉದ್ದ ಜಿಗಿತದಲ್ಲಿ ಬೆಳ್ಳಿ ಗೆದ್ದ ಶೈಲಿ ಸಿಂಗ್ ಜಿಗಿದ 6.59 ಮೀಟರ್ ದೂರವು 2003ರಲ್ಲಿ ಅಂಜು ಬಾಬ್ಬಿಯವರು ಪ್ಯಾರಿಸ್ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಜಿಗಿದ ಅದೇ 6.59 ಮೀಟರ್ ಆಗಿರುವುದು ಕಾಕತಾಳೀಯ.

Anju George(Left) Shaili Singh(Right)

ಆದರೆ ಶೈಲಿಯವರ ಈ ಜಿಗಿತವು ದಾಖಲೆಗೆ ಹೋಗುವುದಿಲ್ಲ. ಏಕೆಂದರೆ ನೈರೋಬಿಯಲ್ಲಿ ಆಗ ಗಾಳಿಯ ವೇಗ 2.2 ಮೀಟರ್ ಇತ್ತು. ಅದು ನಿಶ್ಚಿತ ವೇಗಕ್ಕಿಂತ ಅಧಿಕ ಆದ್ದರಿಂದ ಇಂತಹ ದಾಖಲೆಗಳನ್ನು ಪ್ರತ್ಯೇಕವಾಗಿ ಮಾತ್ರ ಬರೆದಿಡಲಾಗುತ್ತದೆ.

ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಪದಕ ಕೊಡಿಸಿದ ಅಂಜು ಬಾಬ್ಬಿಯವರು, 13ರ ಪ್ರಾಯದಲ್ಲಿ ‌ಶೈಲಿಯನ್ನು ಕರೆತಂದು ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಗೆ ಸೇರಿಸಿದ್ದರು. ಮುಖ್ಯ ತರಬೇತುದಾರ ಅಂಜು ಅವರ ಪತಿ ರಾಬರ್ಟ್.

ನನ್ನ ಪ್ರಯತ್ನ ಫಲ ನೀಡಿದೆ. ಶೈಲಿ ಯಾವತ್ತು ಲಾಂಗ್ ಜಂಪ್ ‌ನಲ್ಲಿ ನನ್ನ ದಾಖಲೆ ಮುರಿಯುತ್ತಾಳೋ ಅದು ನನ್ನ ಅತ್ಯಂತ ಸಂತೋಷದ ದಿನವಾಗಲಿದೆ ಎಂದು ಅಂಜು ಬಾಬ್ಬಿ ತಿಳಿಸಿದ್ದಾರೆ.