ಕಾರ್ಕಳ, ಏ 05: ಲೋಕ ಸಭೆ ಚುನಾವಣೆಯಲ್ಲಿ ,ಬೂತ್ ಗಳನ್ನು ಗೆದ್ದರೆ ಬಿಜೆಪಿ ಅಭ್ಯರ್ಥಿಗಳು ಗೆದ್ದಂತೆ, ಆದ್ದರಿಂದ ಕಾರ್ಯಕರ್ತರು ಮುಂದಿನ 20 ದಿನಗಳಲ್ಲಿ ಎಲ್ಲರೂ ಪ್ರಧಾನಿ ಮೋದಿಯವರಿಗಾಗಿ ಒಗ್ಗಟ್ಟಾಗಿ ದುಡಿಯಬೇಕಿದೆ ಎಂದು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರಿಗೆ  ಮಾಜಿ ಸಚಿವ ಹಾಗು ರಾಜ್ಯ ಬಿಜೆಪಿ ಚುನಾವಣಾ ಸಂಚಾಲಕ ವಿ ಸುನಿಲ್ ಕುಮಾರ್  ಕರೆ ನೀಡಿದರು.

ಅವರು ಶುಕ್ರವಾರ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. 

ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರಿಗೆ, ಬಾಂಬ್ ಸ್ಪೋಟ ನಡೆಸುವ ಭಯೋತ್ಪಾದಕರನ್ನು ಸಮರ್ಥನೆ ಮಾಡುವವರಿಗೆ ಮತ ನೀಡಬೇಕಾ ಎಂದು ಪ್ರಶ್ನಿಸಿದರು. ಗ್ಯಾರಂಟಿಗಳಿಂದ ಕರ್ನಾಟಕ ರಾಜ್ಯ ಇಂದು ದಿವಾಳಿ ಅಂಚಿನಲ್ಲಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ, ಅಂಗನವಾಡಿ ಕಾರ್ಯಕರ್ತರಿಗೆ ವೇತನವಿಲ್ಲ, ಹಿಂದಿನ ರಾಜ್ಯ  ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ರದ್ದು ಮಾಡಿದೆ, ಮದ್ಯಕ್ಕೆ ದರ ಏರಿಸಿ ಒಂದು ಕೈಯಿಂದ ಕಿತ್ತುಕೊಂಡು ಗ್ಯಾರಂಟಿಗಳ ಮೂಲಕ ಕೊಡುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ  10 ವರ್ಷಗಳಲ್ಲಿ ಮಾಡಿದ ಭ್ರಷ್ಟಾಚಾರದ ಫಲವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ‌. ರಾಮನೇ ಇಲ್ಲವೆಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಪಕ್ಷ, ರಾಮ ಮಂದಿರದ ಉದ್ಘಾಟನೆಗೆ ಹೋಗಲ್ಲವೆಂದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸುನಿಲ್ ವಾಗ್ದಾಳಿ ನಡೆಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ  ರಾಮರಾಜ್ಯ ನಿರ್ಮಾಣ ಮಾಡುವುದೆ ನಮ್ಮಗುರಿಯಾಗಿದೆ.  ಧರ್ಮದಿಂದ ನಡೆಯಿರಿ  ಎಂದರು.

ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ  ಮಾತನಾಡಿ ರಾಜ್ಯ ಸರಕಾರ ನೀಡುವ ಹಣ ಸರಕಾರದ ಹಣವಾಗಿದೆ . ಆದರೆ  ಚುನಾವಣೆ ಬಳಿಕ ರಾಜ್ಯ ಸರ್ಕಾರವು ಗ್ಯಾರಂಟಿ  ಅನುದಾನಗಳನ್ನ ನಿಲ್ಲಿಸಿದರೆ  ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುತ್ತೆವೆ ಎಂದರು. 

ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶಪಾಲ್ ಸುವರ್ಣ  ಮಾತನಾಡಿದರು.

ಚುನಾವಣಾ ಪ್ರಭಾರಿ ಶ್ಯಾಮಲ ಕುಂದಾರ್, ರಾಘವೇಂದ್ರ ಕಿಣಿ,  ಬಿಜೆಪಿ ಮುಖಂಡರಾದ ಎಂ ಕೆ ವಿಜಯ ಕುಮಾರ್ , ಮಣಿ ರಾಜ ಶೆಟ್ಟಿ,  ಉದಯ ಎಸ್ ಕೋಟ್ಯಾನ್ , ಬೋಳ  ಜಯರಾಮ ಸಾಲ್ಯಾನ್ , ಜಿಲ್ಲಾ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ . ಮಹೇಶ್ ಶೆಟ್ಟಿ ಕುಡುಪುಲಾಜೆ, ದಿನೇಶ್ ಶೆಟ್ಟಿ , ಕೆ.ಪಿ ಶೆಣೈ ,ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಖ್ಯಾತ ಶೆಟ್ಟಿ , ಸುರೇಶ್ ಶೆಟ್ಟಿ ಶಿವಪುರ ಮೊದಲಾದವರು ಉಪಸ್ಥಿತರಿದ್ದರು. ಹಿರಿಯರಾದ ವಿಜೇಂದ್ರ ಕಿಣಿ  ಸುಂದರ ದೀಪ ಪ್ರಜ್ವಲನೆ ಮಾಡಿದರು.

ಸುಮನ ಪ್ರಾರ್ಥಿಸಿದರು. ಕಾರ್ಕಳ ಬಿಜೆಪಿ ಅಧ್ಯಕ್ಷ. ನವೀನ್ ನಾಯಕ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಸಾಲ್ಯಾನ್ ವಂದನಾರ್ಪಣೆ ಗೈದರು.