ಕೇಂದ್ರ ಸರಕಾರದ ಕೆವೈಸಿ- ಕಿಸಾನ್ ಸಮ್ಮಾನ್ ಯೋಜನೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 76,349 ರೈತರು ಇನ್ನೂ ಇ- ಕೆವೈಸಿ ಮಾಡಿಸಿಕೊಳ್ಳದಿರುವುದು ಕಂಡು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ 38,737 ಮತ್ತು ಉಡುಪಿ ಜಿಲ್ಲೆಯ 37,612 ರೈತರು ಇ- ಕೆವೈಸಿಗೆ ಬದಲಾಗಿಲ್ಲ. ರೈತರು ಸಹಾಯಧನ ನೇರ ಪಡೆಯಲು ಕೆವೈಸಿಯನ್ನು ಇ- ಕೆವೈಸಿ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಹಣ ರದ್ದಾಗುತ್ತದೆ.  ರೈತ ಸಂಪರ್ಕ, ಗ್ರಾಮ ಒನ್ ಮೊದಲಾದ ಕೇಂದ್ರಗಳಿಂದ ಇ- ಕೆವೈಸಿ ಮಾಡಿಸಿಕೊಳ್ಳಬಹುದು.