ಭಾರತದಲ್ಲಿ ಒಟ್ಟು 7,506 ಚದರ ಕಿಲೋಮೀಟರ್ ಕಾಡು ಒತ್ತುವರಿ ಆಗಿದೆ. ಹೆಚ್ಚಿನ ಪ್ರಮಾಣದ ಒತ್ತುವರಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಆಗಿದೆ ಎಂದು ಒಕ್ಕೂಟ ಸರಕಾರ ಮಾಹಿತಿ ನೀಡಿದೆ.

ದೇಶದ ಭೂ ವಿಸ್ತೀರ್ಣದಲ್ಲಿ 23.58 ಶೇಕಡಾ ಅರಣ್ಯ ಪ್ರದೇಶ ಇದೆ. ಅದು 7,75,288 ಚದರ ಕಿಲೋಮೀಟರ್. ಅದರಲ್ಲಿ 7,506 ಚದರ ಕಿಲೋಮೀಟರ್ ಮೀಟರ್ ಎಂದರೆ ದಿಲ್ಲಿ ರಾಜ್ಯದ ವಿಸ್ತೀರ್ಣದ ಐದು ಪಟ್ಟು ಕಾಡು ಒತ್ತುವರಿ ಆಗಿದೆ. ಒತ್ತುವರಿ ಆದ ಕಾಂತಾರದಲ್ಲಿ 45% ಅಸ್ಸಾಂ ರಾಜ್ಯದಲ್ಲಿ ಆಗಿದೆ. ಅದು ಆ ರಾಜ್ಯದ 12 ಶೇಕಡಾ ಪ್ರದೇಶವಾಗಿದೆ. ಈಶಾನ್ಯ ಭಾರತದಲ್ಲಿ ಹೆಚ್ಚು ಎಂದರೆ ಒಟ್ಟು ಒತ್ತುವರಿಯ 56.19 ಶೇಕಡಾ ಒತ್ತುವರಿ ಆಗಿದೆ.