ಮಂಗಳೂರು: 42ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟವನ್ನು ಜನವರಿ 13 ಮತ್ತು 14ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಇಂದಿನ ಪ್ರೆಸ್ ಮೀಟ್ ನಲ್ಲಿ ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷರಾದ ಐವನ್ ಡಿಸೋಜಾ, ಅಧ್ಯಕ್ಷರಾದ ಜಗದೀಶ್ ಶೆಟ್ಟಿ ದೇವಿದಯಾಳ್,ಉಪಾಧ್ಯಕ್ಷರಾದ ರೇಖಾ ಶೆಟ್ಟಿ,ಹಿರಿಯ ಸಲಹೆಗಾರ ಆನಂದ್ ಸೋನ್ಸ್ ಕಾರ್ಯದರ್ಶಿ ಪ್ರಚೇತ್ ಕೆ. ಖಜಾಂಚಿ ನಂದಕುಮಾರ್, ಸಹ ಕಾರ್ಯದರ್ಶಿ ಸುನೀತಾ ಹರೀಶ್, ಸಂಘಟನಾ ಕಾರ್ಯದರ್ಶಿ ಪಿ.ಎ.ಮೊಹಮ್ಮದ್ ಉಪಸ್ಥಿತರಿದ್ದರು.

ಕ್ರೀಡಾಕೂಟದ ಮುಖ್ಯ ಅತಿಥಿಗಳು:

ಜ 13ರಂದು ಕ್ರೀಡಾಕೂಟಕ್ಕೆ ಚಾಲನೆಯನ್ನು ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ  ಬಿ.ನಾಗೇಂದ್ರ ರವರು ನಡೆಸಲಿರುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸ್ಪೀಕರ್  ಯು.ಟಿ.ಖಾದರ್ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು  ದಿನೇಶ್ ಗುಂಡೂರಾವ್ ಉಪಸ್ಥಿತರಿರುವರು.

ವಿಶೇಷ ಆಹ್ವಾನಿತರಾಗಿ ದಕ್ಷಿಣ ಕನ್ನಡ ಸಂಸದರು  ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕರಾದ  ಡಿ.ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ   ಐವನ್ ಡಿಸೋಜಾ, ಜಿಲ್ಲಾಧಿಕಾರಿ  ಮುಲೈ ಮುಗಿಲನ್,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ  ಸಿ.ಬಿ.ರಿಷ್ಯಂತ್,ಮಂಗಳೂರು ಪೋಲಿಸ್ ಕಮೀಷನರ್  ಅನುಪಮ್ ಅಗರ್ವಾಲ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ರವಿ ನಾಯಕ್,ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಾನಂದ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು   ದೇವಿ ಶಿಕ್ಷಣ ಸಂಸ್ಥೆ, ಮೋಹನ್ ಆಳ್ವ ಸ್ಥಾಪಕರು ಆಳ್ವಾಸ್ ಶಿಕ್ಷಣ ಸಂಸ್ಥೆ, ವಿಧಾನ ಪರಿಷತ್ ಸದಸ್ಯರು ಶ್ರೀಮಂಜುನಾಥ ಭಂಡಾರಿ, ಸುರೇಶ್ ರೈ ಅಧ್ಯಕ್ಷರು ಒಡಿಯೂರು ವಿವಿದ್ದೋದೇಶ ಸೌಹಾರ್ದ ಸಹಕಾರ ಲಿಮಿಟೆಡ್.  ಟಿ.ಎಸ್.ಸತೀಶ್ ವ್ಯವಸ್ಥಾಪಕ ನಿರ್ದೇಶಕ ಹೊಯ್ಸಳ ಪ್ರೋಜೆಕ್ಟ್ಸ ಬೆಂಗಳೂರು, ಜಯರಾಮಯ್ಯಾ ರಾಜ್ಯ ಕಾರ್ಯದರ್ಶಿ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಬೆಂಗಳೂರು.

ರಾಜ್ಯದ 31 ಜಿಲ್ಲೆಯ 700 ಕ್ಕೂ ಹೆಚ್ಚಿನ 30 ರಿಂದ 90 ವಯೋಮಾನದ ಮಹಿಳಾ ಮತ್ತು ಪುರುಷ ಅಥ್ಲಿಟ್ಗಳು  ಕ್ರೀಡಾಕೂಟದ ವಿವಿಧ ಕ್ರೀಡಾ ವಿಭಾಗದಲ್ಲಿ ಭಾಗವಹಿಸಲಿರುವರು.

ಮಹಿಳಾ ಮತ್ತು ಪುರುಷರ ಕ್ರೀಡಾ ವಿಭಾಗಳ ವಿವರ:

ಜನವರಿ 13  ರಂದು ಇರುವ ಕ್ರೀಡೆ

ಪುರುಷರ 5000ಮೀ,ಮಹಿಳೆಯರ ವಾಕ್ 3000 ಮೀ,ಟ್ರಿಪಲ್ ಜಂಪ್,‌‌‌ಹೈ ಜಂಪ್,1500 ಮೀ ಓಟ,ಡಿಸ್ಕಸ್ ಎಸೆತ,100 ಮೀ ಓಟ,ಜಾವೆಲಿನ್ ಎಸೆತ,200ಮೀ ಓಟ, 5000  ಪುರುಷರ ಓಟ, 3000 ಮೀ ಮಹಿಳೆಯರ ಓಟ.

ಜನವರಿ 14 ರಂದು 10000 ಮೀ ಮಹಿಳೆಯರ ಮತ್ತು ಪುರುಷರ ಓಟ,ಹ್ಯಾಮರ್ ಎಸೆತ,ಲಾಂಗ್ ಜಂಪ್,800 ಮೀ ಓಟ, ಶಾಟ್ ಪುಟ್,ಹೈ ಜಂಪ್,400 ಮೀ ಓಟ,100 ಮತ್ತು 80 ಮೀ ಹರ್ಡಲ್ಸ, ರಿಲೇ( 4*100 ).

16 ಕ್ಕೂ ಹೆಚ್ಚಿನ ಕ್ರೀಡೆಗಳು.

ಅಥ್ಲೀಟ್ ಗಳಿಗೆ ಸೌಲಭ್ಯಗಳು: 

ಜ.13 ಮತ್ತು 14 ರಂದು ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟ ನೀಡಲಾಗುತ್ತದೆ.ಹೊರ ಜಿಲ್ಲೆಗಳಿಂದ ಬರುವ ಅಥ್ಲಿಟ್ಸ್ ಗಳಿಗಾಗಿ ಸುಸಜ್ಜಿತವಲ್ಲದ ವಾಸ್ತವ್ಯ ಒದಗಿಸಲಾಗುವುದು.ತುರ್ತು ಪರಿಸ್ಥಿತಿಗಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ನೋಂದಣಿ ಪ್ರಕ್ರಿಯೆ:

ಈ ಕ್ರೀಡಾಕೂಟ ಓಪನ್ ಚಾಂಪಿಯನ್ಶಿಪ್ ಆಗಿರುತ್ತದೆ.30 ರಿಂದ 90 ವಯೋಮಿತಿಯ ಆಸಕ್ತ ಸ್ಪರ್ಧಿಗಳು ಭಾಗವಹಿಸಬಹುದು.ನೋಂದಣಿ ಮಾಡಲು 400 ರೂಪಾಯಿ ಯ ನೆಫ್ಟ್ ಅಥವಾ ಕ್ಯೂಆರ್ ಕೋಡ್ ಮೂಲಕ ಮಾಡುವುದು, ಮತ್ತು ಜಿಲ್ಲಾ ಮಾಸ್ಟರ್ಸ್ ಅಸೋಸಿಯೇಷನ್ ಖಜಾಂಚಿ ನಂದಕುಮಾರ್ ( 8618507080) ಅವರಿಗೆ ವಾಟ್ಸಾಪ್ ಮೂಲಕ  ವಿವರ ಸಹಿತ ತಿಳಿಸಬೇಕು.