ಮಂಗಳೂರು: ಮಂಗಳೂರು ನಗರದ ಕದ್ರಿ ಜೋಗಿ ಮಠ ಸಮೀಪದ ಉಳ್ಳಾಲ ಶ್ರೀನಿವಾಸ ಮಲ್ಯ ಉದ್ಯಾವನದಲ್ಲಿ ಉಳ್ಳಾಲ ಶ್ರೀನಿವಾಸ್ ಮಲ್ಯ ಜನ್ಮ ದಿನ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆದ ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯರ 124ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅರ್ಜುನ್ ಭಂಡಾರ್ಕರ್ ರವರನ್ನು ಹಾಗೂ ಮಲ್ಯ ಕುಟುಂಬಸ್ಥರಾದ ಉಳ್ಳಾಲ ನರಹರಿ ಮಲ್ಯರವರನ್ನು ಗೌರವಿಸಲಾಯಿತು.
ಸಮಿತಿಯ ಸಂಚಾಲಕಿ ಮಂಜುಳಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀನಿವಾಸ್ ಮಲ್ಯರ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಮಲ್ಯರ ಕುಟುಂಬಸ್ಥರಾದ ನರಹರಿ ಮಲ್ಯ, ಸಮಿತಿಯ ಗೌರವಾದ್ಯಕ್ಷರು, ಮಾಜಿ ಸಚಿವರಾದ ರಾಮನಾಥ್ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಮ್ರಾಹಿಂ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್, ಮೂಡದ ಅಧ್ಯಕ್ಷರಾದ ಸದಾಶಿವ ಉಳ್ಳಾಲ, ಕರಾವಳಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ. ಎ . ಗಫೂರ್, ಕುದ್ರೋಳಿ ದೇವಸ್ಥಾನದ ಕಾಜಾಂಚಿ ಪದ್ಮರಾಜ್ ಪೂಜಾರಿ, ಮಾಜಿ ಶಾಸಕರಾದ ಜೆ. ಆರ್. ಲೋಬೊ , ಕೊಂಕಣಿ ಅಕಾಡೆಮಿ ಸದಸ್ಯ ಸಮರ್ಥ ಭಟ್, ಮಾಜಿ ಮಹಾಪೌರರಾದ ಶಶಿಧರ್ ಹೆಗ್ಡೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್.ಬಿ. ಸಾಲಿಯಾನ್, ಪುರುಷೋತ್ತಮ ಚಿತ್ರಾಪುರ ಮಾಜಿ ಪಾಲಿಕೆ ಸದಸ್ಯರಾದ ನಾಗವೇಣಿ, ಪದ್ಮನಾಭ್ ಪನಿಕರ್, ಪದ್ಮನಾಭ ಅಮೀನ್, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕಲಾ ಜೋಗಿ, ರೂಪಾ ಚೇತನ್, ಮಲ್ಯ ಜನ್ಮ ದಿನ ಆಚರಣ ಸಮಿತಿಯ ಪದಾಧಿಕಾರಿಗಳಾದ ನೀತ್ ಶರಣ್, ರಾಜೇಶ್ ದೇವಾಡಿಗ, ಟಿಸಿ ಗಣೇಶ್ , ಹೊನಯ್ಯ , ಯೋಗೀಶ್ ನಾಯಕ್, ಮಮತಾ ಕುಡ್ವ, ವಿದ್ಯಾ ಶೆಣೈ, ನಿನಾ ಕೆ.ಸಿ ಮತ್ತಿತರು ಉಪಸ್ಥಿತರಿದ್ದರು.