ಮಂಗಳೂರು: 1920ರಲ್ಲಿ ಹೆಣ್ಣು ಮಕ್ಕಳಿಗಾಗಿ ಮದರ್ ಮೇರಿ ಅಲೋಶಿಯರವರು ಸ್ಥಾಪಿಸಿದ ಸಂತ ಆಗ್ನೆಸ್ ಶಿಕ್ಷಣಾ ಸಂಸ್ಥೆಯು ಶತಮಾನೋತ್ಸವ ಸಂಭ್ರಮಚರಣೆಯಲ್ಲಿದ್ದು, ಕಳೆದ 100ವರುಷಗಳಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿ ಸಾವರಾರು ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಪೂರೈಸಿ ವಿಶ್ವದಾದ್ಯಂತ ಪಸರಿಸಿದ್ದಾರೆ. ಹಲವಾರು ವಿದ್ಯಾರ್ಥಿನಿಯರು ವಿಜ್ಞಾನಿಗಳು, ಲೆಕ್ಕಪರಿಶೋಧಕರು ಕಂಪೆನಿಗಳ ಮುಖ್ಯಸ್ಥರು, ಸ್ವ ಉದ್ಯೋಗಿಗಳಾಗಿ ಹಾಗೂ ರಾಜಕೀಯ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮಾಡಿರುತ್ತಾರೆ.
ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣದಲ್ಲಿ 1999ರಲ್ಲಿ ಸಂತ ಆಗ್ನೆಸ್ ಕಾಲೇಜು ನ್ಯಾಕ್ ನಲ್ಲಿ 'ಎ' ಗ್ರೇಡ್ ಹಾಗೂ ಫೈವ್ ಸ್ಟಾರ್ ಕಾಲೇಜು ಎಂದು ಪ್ರಮಾಣಿಕರಿಸಲ್ಪಟಿದೆ 2005 ರಿಂದ ನಿರಂತರವಾಗಿ 'ಎ' ಗ್ರೇಡನ್ನು ಕಾಯ್ದಿರಿಸಿದ ಕಾಲೇಜು ಇದಾಗಿದೆ.
ನೂತನ ಪ್ರಾಂಶುಪಾಲರು : ಸಂತ ಆಗ್ನೆಸ್ ಪದವಿ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಸಿ]ಡಾ। ವಿನಿಸ್ಸಾ ಎ.ಸಿ ಅವರು ಅಧಿಕಾರ ಸ್ವೀಕರಸಿದ್ದು ಇವರು ಬೆಳ್ತಂಗಡಿ ತಾಲೂಕು ಅಳದಂಗಡಿಯವರಾಗಿದ್ದು ಸಿಸ್ಟರ್ ಆಫ್ ಅಪೊಸ್ತಲಿಕ್ ಕಾರ್ಮೆಲ್ ಸಭೆಯನ್ನು ಸೇರಿ ಒಬ್ಬ ಧರ್ಮಭಗಿನಿಯಾಗಿ ಸಂತ ಆಗ್ನೆಸ್ ಹೈಸ್ಕೂಲ್ ಹಾಗೂ ಸಂತ ಆಗ್ನೆಸ್ ಕಾಲೇಜುನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ 15ವರುಷಗಳಿಂದ ಸಂತ ಆಗ್ನೆಸ್ ಕಾಲೇಜಿನಲ್ಲಿ Economic ವಿಭಾಗದ ಮುಖ್ಯಸ್ಥರಾಗಿ ಹಾಗೂ ಉಪಪ್ರಾಶುಪಾಲರಾಗಿ ಸೇವೆಸಲ್ಲಿಸಿದ್ದು, ಮದ್ರಾಸ್ ಯುನಿವರ್ಸಿಟಿಯಿಂದ Economic Analysis of Homelessness ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.