ಮಂಗಳೂರು: ಪ್ರಸ್ತುತ ಕೊರೋನಾ ಪಿಡುಗಿನಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಗ್ರಾಮಾಂತರ ವಿದ್ಯಾರ್ಥಿಗಳಿಗೂ ನೆರವಾಗುವ ನಿಟ್ಟಿನಲ್ಲಿ ಸಿಇಟಿ ಬರೆಯುವ ಎಂಜಿನಿಯರಿಂಗ್ ಶಿಕ್ಷಣ ಆಕಾಂಕ್ಷೆಯ ವಿದ್ಯಾರ್ಥಿಗಳಿಗಾಗಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ನೇತೃತ್ವದಲ್ಲಿ 'ಯು ಕ್ಯಾನ್' ಸಿಇಟಿ ಆನ್‍ಲೈನ್ ಅಣಕು ಪರೀಕ್ಷೆಗಳ ಪೋರ್ಟಲ್ ರೂಪಿಸಿದೆ. ಕೆನರಾ ಎಂಜಿನಿಯರಿಂಗ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಪೋರ್ಟಲ್‍ನ ಲೋಕಾರ್ಪಣೆ ಜುಲೈ 14 ರಂದು ಮಂಗಳವಾರ ಪೂರ್ವಾಹ್ನ 11ಕ್ಕೆ ಶಾಸಕ ಶ್ರೀ ವೇದವ್ಯಾಸ ಕಾಮತ್ ಅವರಿಂದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಶ್ರೀ ಪ್ರತಾಪ್ ಸಿಂಹ ನಾಯಕ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ಸ್ನೇಹಿ ಯು ಕ್ಯಾನ್:- 

'ಯು ಕ್ಯಾನ್' ಸಿಇಟಿ ಆನ್‍ಲೈನ್ ಅಣಕು ಪರೀಕ್ಷೆಗಳ ಪೋರ್ಟಲ್‍ನಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿ ಪ್ರತೀ ವಿಷಯದಲ್ಲೂ 200ಕ್ಕೂ ಅಧಿಕ ಅಣಕು ಸರಣಿ ಪರೀಕ್ಷೆಗಳಿವೆ. ಪರೀಕ್ಷೆ ಬರೆದು ಮುಗಿಸಿದ ಕೂಡಲೇ ವಿದ್ಯಾರ್ಥಿಗಳಿಗೆ ಅವರ ಸಾಧನೆ, ಗಳಿಸಿದ ಅಂಕಗಳ ವಿವರಗಳು ದೊರೆಯುವುದರಿಂದ ಅವರು ತಮ್ಮ ಸಿದ್ಧತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶ ದೊರಕಿಸಿದಂತಾಗಿದೆ. ಅನುಭವೀ ವಿಷಯ ತಜ್ಞರು ಸಿದ್ಧಪಡಿಸಿದ ಈ ವಿಷಯವಾರು ಪ್ರಶ್ನೆಗಳ ಸರಣಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷಾ ತಯಾರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ವಿಪುಲ ಅವಕಾಶಗಳಿರುವ ಎಂಜಿನಿಯರಿಂಗ್ ಶಿಕ್ಷಣ ಆಕಾಂಕ್ಷಿಗಳಿಗೆ ಸಿಇಟಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಹಾಗೂ ಉತ್ತಮ ಅಂಕಗಳಿಸಿ ಯಶಸ್ಸು ದಾಖಲಿಸಲು ಯು ಕ್ಯಾನ್ ನೆರವು ನೀಡಲಿದೆ. ಜು 14 ರಿಂದ ಈ ಅವಕಾಶವನ್ನು ಆಸಕ್ತ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದ್ದು ಸವಿವರಗಳಿಗೆ ತಿತಿತಿ.ಛಿಚಿಟಿಚಿಡಿಚಿeಟಿgiಟಿeeಡಿiಟಿg.iಟಿ  ಲಿಂಕ್ ಮೂಲಕ ಸಂಪರ್ಕಿಸಬಹುದಾಗಿದೆ.