ಮಂಗಳೂರು (ಸೆಪ್ಟೆಂಬರ್ 3 ):- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮ (ನಿ) ಇವರ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್ಖ್, ಆಂಗ್ಲೋ ಇಂಡಿಯನ್ ಹಾಗೂ ಪಾರ್ಸಿ ಜನಾಂಗದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು 2020-21 ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ./ನೀಟ್‍ನಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನಿಗಮದ ಅರಿವು ಸಾಲ ಯೋಜನೆಯಡಿ ಸಾಲ ಪಡೆಯಲು ಆನ್‍ಲೈನ್ kmdc.kar.nic.in/arivu2  ಮುಖಾಂತರ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನ. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರಿಂಟ್‍ಔಟನ್ನು ತೆಗೆದು ಕ್ಯೂಆರ್ ಕೋಡಿನೊಂದಿಗೆ ದಾಖಲಾತಿಗಳೊಂದಿಗೆ ನೇರವಾಗಿ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.

     ಅರ್ಜಿಯೊಂದಿಗೆ ಸಲ್ಲಿಸಬೆಕಾದ ದಾಖಲೆಗಳ ವಿವರ ಇಂತಿವೆ: ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿ ಕ್ಯೂಆರ್ ಕೋಡಿನೊಂದಿಗೆ, ಪ್ರಸ್ತುತ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೂ 6 ಲಕ್ಷ ಮಿತಿಯಲ್ಲಿರಬೇಕು, ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ, ಸಿ.ಇ.ಟಿ, ನೀಟ್ ಪರೀಕ್ಷೆ ಪ್ರವೇಶ ಪತ್ರ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಅಂಕ ಪಟ್ಟಿಯ ದೃಢೀಕೃತ ಪ್ರತಿ, 50 ರೂಪಾಯಿಯ ಇ-ಸ್ಟ್ಯಾಂಪ್‍ನೊಂದಿಗೆ ಇಂಡಿಮ್ನಿಟಿ ಬಾಂಡ್, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ 2.

   ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಮೌಲಾನಾ ಅಜಾದ್ ಭವನ, 2 ನೆ ಮಹಡಿ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು, ದೂರವಾಣಿ ಸಂಖ್ಯೆ 0824-2951644 ನ್ನು ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.