ಮಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿeನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ನಡೆದ ೨೪ನೇ ಘಟಿಕೋತ್ಸವದಲ್ಲಿ ಗುರುಪುರ ಕೈಕಂಬದ ಡಾ.ಸಫ್ವಾನ್ ಅಹ್ಮದ್ ಅವರು ಬೆಸ್ಟ್ ನ್ಯೂರೋಲಜಿ ರೆಸಿಡೆಂಟ ಚಿನ್ನದ ಪದಕ ಸಹಿತ ಡಿಎಂ ನ್ಯೂರೋಲಜಿ ಪದವಿ ಪಡೆದಿದ್ದಾರೆ.
ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದಿರುವ ಅವರು, ಬಳಿಕ ಮೈಸೂರು ಮೆಡಿಕಲ ಕಾಲೇಜಿನಲ್ಲಿ ಜನರಲ ಮೆಡಿಸಿನ್‌ನಲ್ಲಿ ರಾಜೀವ ಗಾಂಧಿ ಆರೋಗ್ಯ ವಿeನಗಳ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಮಟ್ಟದಲ್ಲಿ ಆರನೇ ಮತ್ತು ಮೈಸೂರು- ಬೆಂಗಳೂರು ವಲಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಎಂಡಿ ಪದವಿ ಮುಗಿಸಿದ್ದರು.
ಡಾ.ಸಫ್ವಾನ್ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ನ್ಯೂರೋಲಜಿ ವಿಭಾಗದಲ್ಲಿ ಕನ್ಸಲ್ಟೆಂಟ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು, ದಿವಂಗತ ಅಹ್ಮದ್ ಹುಸೇನ್ ಮತ್ತು ತಸ್ನೀಮ ದಂಪತಿ ಪುತ್ರ.