ಜೆಪ್ಪಿನ ಮೊಗರು ನಿವಾಸಿ ಹಸಿರು ಪುತ್ರಿ ಹನಿ ಎಂಬ 12 ರ ವಯಸ್ಸಿನ ಬಾಲಕಿಯ ನೇತೃತ್ವದ ' ಗ್ರೀನ್ ವಾರಿಯರ್ಸ್ ' ಎಂಬ ಪರಿಸರ ಪ್ರೇಮಿ ತಂಡವು ಕಳೆದ 3 ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಪೂರಕವಾದ ಕೆಲಸಗಳನ್ನು ಮಾಡುತ್ತಾ , ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದೆ.
ಇಂದು ಜೇಪ್ಪಿನ ಮೊಗರ್ ವಠಾರದ ಸುಮಾರು 40 ಮನೆಗಳಿಗೆ ಹೋಗಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಗಳನ್ನು ತಿಳಿಸಿ ಪೇಪರ್ ಹಾಗೂ ಬಟ್ಟೆ ಚೀಲಗಳನ್ನು ನೀಡಿ, ದೀಪಾವಳಿಗೆ ಪಟಾಕಿ ಸಿಡಿಸಿ ಮಾಲಿನ್ಯ ಮಾಡಿ ಕಣ್ಣಿನ ದೃಷ್ಟಿ ಕಳೆದು ಕೊಳ್ಳುವುದಕ್ಕಿಂತ ಹಣತೆ ದೀಪ ಉರಿಸಿ ನಿಸರ್ಗದ ಚೈತನ್ಯಕ್ಕೆ ಬೆಳಕು ನೀಡೋಣ ಎಂದು ಹೇಳಿ ಮನೆ ಮನೆಗೆ ಹಣತೆ ಗಳನು ನೀಡಿ ಧಾತ್ರಿಯ ನೆಮ್ಮದಿಗೆ ಖಾತ್ರಿ ಆಗುವಂತೆ ಪರಿಸರಕ್ಕೆ ಒಂದು ಉತ್ತಮ ಕೊಡುಗೆ ನೀಡುವ ಯೋಗ್ಯ ಕಾರ್ಯಕ್ರಮವನ್ನು ಮಾಡಿರುತ್ತಾರೆ.
ಮಂಗಳೂರಿನ ಇತ್ತೀಚೆಗಿನ ನೀರಿನ ಬರ ಪರಿಸ್ಥಿತಿ ಮತ್ತು ಕುಸಿಯುತ್ತಿರುವ ಅಂತರ್ಜಲ , ಏರುತ್ತಿರುವ ತಾಪಮಾನ...ಇದೆಲ್ಲಾ 12 ರ ವಯಸ್ಸಿನ ಬಾಲಕಿ ಹನಿ ಮತ್ತು ಆಕೆಯ ತಂಡಕ್ಕೆ ಅರ್ಥ ಆಗುತ್ತಾ ಇದೆ ಮತ್ತು ಅದಕ್ಕೆ ಪರಿಹಾರ ಮಾಡಬೇಕು ಎಂದು ಯೋಚನೆ ಮಾಡಿ ಕಾರ್ಯಗತ ರಾಗುತ್ತಾರೆ ಎಂದರೆ ಮಂಗಳೂರಿನ ಜಿಲ್ಲಾಡಳಿತಕ್ಕೆ ಮತ್ತು ಕೆಲವು ಇಲ್ಲಿನ ಅತೀ ಬುದ್ಧಿವಂತ ಜನರಿಗೆ ಯಾಕೆ ಇನ್ನೂ ಅರ್ಥ ಆಗುತ್ತಾ ಇಲ್ಲ ಎಂಬು ಇದು ಕೇವಲ ಪ್ರಚಾರದ ಧ್ವನಿ ಅಲ್ಲಾ...ಕಾರ್ಯ ರೂಪದ ಹನಿ ಧ್ವನಿ...ಪೋಷಕರ ಧ್ವನಿ ಬದಲಾಗದೆ ಮಕ್ಕಳ ಧ್ವನಿ ಬದಲಾಗದು, ಮಕ್ಕಳ ಧ್ವನಿ ಬದಲಾದರೆ ಪೋಷಕರ ಧ್ವನಿ ಸಹಜವಾಗಿಯೇ ಬದಲಾವಣೆ ಆಗುತ್ತದೆ.
ಮಂಗಳೂರಿನ ಹನಿ ಎಂಬ ಬಾಲಕಿ ಪ್ರಕೃತಿ ರೋದನಕ್ಕೆ ಕಿವಿ ಯಾಗುತ್ತಿದ್ದಾಳೆ ಮತ್ತು ಅದಕ್ಕೆ ಸ್ಪಂದಿಸುತ್ತ ಇದ್ದಾಳೆ ಅಂದ್ರೆ ಇದು ಬದಲಾವಣೆಯ ಮತ್ತು ಮನ ಪರಿವರ್ತನೆಯ ದಾರಿ ಎನ್ನಬಹುದು.
(Dinesh Holla ( Environmentalist )